ಮೂರು ಭಜನೆಗಳು

ನನಗೆ ಗುರುಕುಲದ ಅನುಭವ ಆಗಿದ್ದು ಸಂತ ಶ್ರೀ ಭದ್ರಗಿರಿ ಅಚ್ಯುತದಾಸರ ಆಶ್ರಯದಲ್ಲಿದ್ದಾಗ. ಐದು ವರ್ಷ ಕಾಲ ಅವರ ಜೊತೆಯಲ್ಲಿದ್ದರೂ, ಅವರಂತೆ ವಾಗ್ಮಿಯಾಗಲಿಲ್ಲ ಎನ್ನುವುದು ನನ್ನ ಕೊರಗು. ದೀಪದ ಕೆಳಗಿನ ಕತ್ತಲಿನಂತೆಯೇ ಉಳಿದುಬಿಟ್ಟೆ. ಆದರೆ, ಅವರು ನನ್ನ ಬರವಣಿಗೆಗೆ ಸ್ಫೂತರ್ಿ ತುಂಬಿದರು. ಅವರ ಒಡನಾಟ, ಸಹವಾಸದಿಂದ ಪ್ರೇರಿತನಾಗಿ ಕೆಲವು ಭಜನೆಗಳನ್ನೂ ರಚಿಸಲು ಯತ್ನಿಸಿದೆ. ಆಗ ಅವರು ವರದ ವಿಠಲ ಎಂಬ ಅಂಕಿತ ನೀಡಿ ಆಶೀರ್ವದಿಸಿದರು. ನನ್ನ ಬರಹಗಳನ್ನು, ಭಜನೆಗಳನ್ನು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ದಾಸವಾಣಿ ಮಾಸಿಕದಲ್ಲಿ ಪ್ರಕಟಿಸಿದರು. ನಾನು ಬರವಣಿಗೆಯೇ ನನ್ನ ಶಕ್ತಿ ಎಂದರಿತು ಪತ್ರಕರ್ತನ ವೃತ್ತಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಶ್ರೀಯುತ ಅಣ್ಣನವರೇ ನನಗೆ ದಾರಿದೀಪವಾದರು. ಇಂದು ನಾನು ಕನ್ನಡದ ಹೆಸರುವಾಸಿ ದೈನಿಕವೊಂದರಲ್ಲಿ ಕ್ರೀಡಾ ಸಂಪಾದಕನಾಗಿರುವುದಕ್ಕೆ ಅವರ ಅನುಗ್ರಹವೇ ಕಾರಣ.

ಕೃಷ್ಣ ಭಜನೆ

ಗೋಪೀ ಜನಪ್ರಿಯ ಗೋಪಾಲ ಬಾಲ
ಆಪತ್ತುಗಳ ಕಳೆಯೋ ರುಕ್ಮಿಣೀ ಲೋಲ

ಕಾವ ಕರುಣಾನಿಧಿಯೆ ವಿಷ್ಣು ವಿಶಾಲ
ಮಾವಮರ್ದನ ಕೃಷ್ಣ ಪೊರೆಯೋ ಕೃಪಾಳ

ತವದಾಸ್ಯ ನೀಡೆನಗೆ ಭಕ್ತ ಪರಿಪಾಲ
ಪವಮಾನನುತ ವಂದೇ ಕೇಶವ ನಿರಾಳ

ನವ ವಿಧದ ಭಕುತಿ ಕೊಡು ಸಂತಜನ ಲೋಲ
ಭುವನದಲಿ ನಿನ್ನುಳಿದು ಉಂಟೇ ಉಳಿಗಾಲ

ಪರಮಾತ್ಮ ಪರಿಪೂರ್ಣ ಪರಮ ಗುಣಧಾಮ
ವರದವಿಠಲನುತನೆ ಕಾಯೊ ರಘುರಾಮ

ಶ್ರೀ ಕ್ಷೇತ್ರ ಅಯೋಧ್ಯೆ

ಅಣ್ಣನವರ ಜೊತೆ ಹಲವು ಬಾರಿ ಭಾರತ ಯಾತ್ರೆ ಮಾಡಿರುವ ನಾನು ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ ಒಮ್ಮೆ ಹೋಗಿದ್ದೇನೆ. ಅಯೋಧ್ಯೆ ಯಾತ್ರೆ ಮುಗಿಸಿಕೊಂಡು, ಕೃಷ್ಣ ಜನ್ಮಭೂಮಿ ಮಥುರೆಗೆ ತೆರಳಿದಾಗ ಅಲ್ಲಿ ಅಯೋಧ್ಯೆ ಬಗ್ಗೆ ಹಾಡು ಕಟ್ಟುವ ಮನಸ್ಸಾಯಿತು. ಆ ರೀತಿ ನಾನು ಈ ಭಜನೆ ಬರೆದಾಗ ಬೆಳಗಿನ ಜಾವ 4 ಗಂಟೆಯಾಗಿತ್ತು.

ರಾಮಚಂದ್ರ ಪ್ರಕಟಭೂಮಿ ಸಾಕೇತಪುರಿ ಸುಂದರ

ಧನ್ಯಳಾದೆ ನೀನು ಸೀತೆ ರಾಮನನ್ನು ವರಿಸಿ ಮಾತೆ
ಜನಿಸಿ ಮಿಥಿಲೆಯಲ್ಲಿ ನೀನು ಸಾಕೇತವ ಸೇರಿದೆ 1

ರಾಮಚಂದ್ರ ದೇವ ಬೆಳೆದ ಜಾನಕಿಯೊಡನೆ ಸೇರಿ ನಲಿದ
ಮಾತೆ ಮಾತಿಗಾಗಿ ತೊರೆದ ಸಾಕೇತಪುರಿ ಸುಂದರ 2

ಸರಯೂ ತೀರ ಸ್ಥಿತವೀ ರಾಮ – ನಾಮ ಜಪದಿ ನಿರತ ಧಾಮ
ಪ್ರೇಮಭರಿತ ಭಕ್ತಿ ಗ್ರಾಮ ಸಾಕೇತಪುರಿ ಸುಂದರ 3

ಸಾಧ್ವಿಮಣಿ ಊಮರ್ಿಳಾ ಪತಿಯು ಲಕುಮಣಾ ದೇವ
ತ್ಯಾಗಿ ಯೋಗಿ ರಾಮರಾಗಿ ನಿಮ್ಮ ನಾಡು ಸುಂದರ 4

ರಾಮ ರಾಮ ರಾಮಾ ರಾಮ ನಾಮ ವರದ ವಿಠಲ ರಾಮ
ಪುರ ಅಯೋಧ್ಯಾವಾಸಿ ರಾಮ ಪೊರೆಯೋ ವಿಶ್ವವಾ 5

ಶ್ರೀ ಕ್ಷೇತ್ರ ಪ್ರಯಾಗ

ಗಂಗಾ ಯಮುನಾ ಸಂಗಮ ಸರಸ್ವತೀ ಹೃದಯಂಗಮಾ

ಪಾವನವೀ ನೆಲ ಪಂಚವರ್ಣದ ಜಲ ಭಾವುಕ ತನುಮನ ಕುಣಿವ ಸ್ಥಳ
ಲೀಲೆಯಿಂದಲಿ ದೋಷ ಕ್ಲೇಶವ ಹರಿಸುವ ಶ್ರೀ ಲಕುಮೀಪತಿಯ ಪುಣ್ಯಸ್ಥಳ 1

ವೇದ ಪುರುಷನ ಪಾದದಿಂದಲಿ ಜನಿಸಿ ನಾಟ್ಯಭೈರವ ಪರಶಿವನಿಂದ ಬೀಳ್ಕೊಂಡು
ಆ ಭಗೀರಥಗಾಗಿ ಭೂಮಿಗೆ ಧುಮುಕಿದ ಭಾಗೀರಥಿ ಜಾಹ್ನವಿಯ ಸ್ಥಳ 2

ಗೋವರ್ಧನ ಗಿರಿಧಾರಿಯ ಜನುಮಕೆ ಆನಂದದಿಂದಲಿ ನಲಿದ ಪಾವನಳು
ರಾಧೆಯು ಕೃಷ್ಣನೂ ನಿತ್ಯ ವಿಹರಿಸುವ ಸುಂದರ ಯಮುನೆಯು ಹರಿವ ಸ್ಥಳ 3

ಸರಸಿಜ ಸಂಭವನಿಚ್ಛೆಗೆ ತಲೆಬಾಗಿ ಸುರಸಿರಿ ಸರಸ್ವತಿ ಧರೆಯಲ್ಲಿ
ಪರಮಸ್ವರೂಪದಿ ಗುಪ್ತಗಾಮಿನಿಯಾಗಿ ವರಸಿದ್ಧಿ ಪ್ರದಳಾಗಿ ಹರಿವ ಸ್ಥಳ 4

ನಲಿವಿಂದ ವರಗಂಗೆ ಒಲವಿಂದ ಸಿರಿ ಯಮುನೆ ಚೆಲುವಿಂದ ಗುಪಿತದಿ ಸರಸ್ವತೀ
ಸಂಗಮವಾಗುವ ಮನಸೂರೆಗೊಳ್ಳುವ ವರದವಿಠಲನ ಭಜಿಸುವಾ ಸ್ಥಳ 5

0 Responses to “ಮೂರು ಭಜನೆಗಳು”



  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s





Follow

Get every new post delivered to your Inbox.